ಸತ್ಯವು ಹೇಗೆ ಸಾಪೇಕ್ಷವೋ ಹಾಗೆ ಸೌಂದರ್ಯವೂ ಸಹ. ಅದರಲ್ಲಿ ನಿರಪೇಕ್ಷವಾದ ಯಾವುದೇ ಗುಣಗಳಿರುವುದಿಲ್ಲ. ಸೌಂದರ್ಯವು ಆಯಾ ಕಾಲ, ಆ ಘಟ್ಟದ ಸಾಮೂಹಿಕ ಗ್ರಹಿಕೆ, ತನ್ಮೂಲಕ
ಉಂಟಾಗುವ ಪ್ರಜ್ಞೆ, ಅವು ರೂಢಿಸಿಕೊಳ್ಳುವ ಮೌಲ್ಯಗಳನ್ನು ಅವಲಂಬಿಸಿರುತ್ತದೆ. ಹೀಗೆ
ಸಾಗುವ ಸೌಂದರ್ಯ ಲಹರಿ, ತತ್-ಕಾಲಿಕವಾಗಿದ್ದು ಚಲನಶೀಲ ಗುಣವನ್ನು ಹೊಂದಿರುತ್ತದೆ;
ಹಾಗಾಗಿ, ಯಾವುದು ಚಲನಶೀಲವೋ ಅದು ನಿರಂತರವಾಗಿರಲು ಸಾಧ್ಯವಿಲ್ಲ.
ಒಟ್ಟಾರೆ, ವಸ್ತು
ಪ್ರಪಂಚದಲ್ಲಿ ಸೌಂದರ್ಯವೆನ್ನುವುದು ಮಿಥ್ಯ. ಆದರೆ, ನಾವು ಅಂತರ್ಮುಖಿಯಾಗಿ
ಅಂತರಂಗವನ್ನು ಹೊಕ್ಕು ಮಥಿಸಿದರೆ ನೈಜ ಸೌಂದರ್ಯದ ದರ್ಶನವಾಗುತ್ತದೆ.
ಹೀಗೊಂದು ಪ್ರಶ್ನೆ: ಇಂಗ್ಲೀಷ್ ನ ELECTRONICS ಗೆ ಕನ್ನಡದ ಸಮಾನಾರ್ಥಕ ಪದ ಯಾವುದು?
ಇಂಗ್ಲೀಷ್ ನ ELECTRONICS ಪದವೇ ಈಗ ಒಂದು (misnomer ) ವಿಹಿತಾರ್ಥವಿರದ ಶಬ್ಧವಾಗಿದೆ;
ಇದರ ಹುಟ್ಟಿಗೆ ಕಾರಣವೂ ಇದೆ. Vacuum Tubes/electronic Valves ಗಳ ಕಾಲದಲ್ಲಿ
ಹುಟ್ಟಿದ ಪದವಿದು. ಅಲ್ಲಿ electron ಗಳ ಹರಿವು ಇರುತ್ತಿತ್ತು; ಹಾಗಾಗಿ ಈ Vacuum
Tubes/electronic Valves ಗಳನ್ನು ಒಳಗೊಂಡ ಎಲ್ಲ ಉಪಕರಣಗಳಿಗೆ electronic devices
ಎಂದೂ, ಅದರ ಶಾಸ್ತ್ರೋಕ್ತ ಅಧ್ಯಯನಕ್ಕೆ Electronics ಎಂದು ಕರೆಯಲಾರಂಭಿಸಿದರು; ಹೀಗೆ
'ELECTRONICS' ಪದ ಹುಟ್ಟಿತು.
ನಂತರದ ದಿನಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿ
ಗೊಂಡು Semi Conductor diode ಗಳು Transistor ಗಳು ಈ Vacuum Tubes/electronic
Valves ಗಳನ್ನು ಹಿಂದಿಕ್ಕಿದವು. ಈ Semi conductor ಗಳಲ್ಲಿ electrons ಮತ್ತ
holes ಗಳೆಂಬ ಪರಸ್ಪರ ವಿರುದ್ಧ ವಿದ್ಯದಂಶಳಿರುವ ಕಣಗಳಿಂದ (for now let us not get
in to the details of holes; they are not particles, but have qualities
of particles) ಎಲ್ಲ ಕಾರ್ಯ ನಡೆಯುತ್ತದೆ. ಆದರೆ, ಈ electronics ಪದ
ಚಾಲ್ತಿಯಲ್ಲಿದ್ದುದರಿಂದ ಹಾಗೇ ಕರೆಯುವ ರೂಢಿಯಾಯ್ತು.
Computer ಸಹ ಈ
Semiconductor ಗಳಿಂದಲೇ ತಯಾರಾಗಿರುವುದರಿಂದ ಅದರ ಮೂಲಕ ರವಾನೆಯಾಗುವ Mail ಅನ್ನು
Electronic Mail ಅಂತಲೂ ಸಂಕ್ಷಿಪ್ತವಾಗಿ E-Mail ಅಂತಲೂ ರೂಢಿಯಲ್ಲಿ ಬೆಳೆದು ಬಂತು.
ಈಗ ನಾವು ಇದನ್ನು ಕನ್ನಡಕ್ಕೆ ತರುವಾಗ ಹಲವರು ವಿಧ-ವಿಧವಾಗಿ ಪದ ಹುಟ್ಟು
ಹಾಕಿದ್ದಾರೆ. ಮಿಂಚಿನ ವೇಗದಲ್ಲಿ ತಲುಪುವ ಅಂಚೆ ಎಂದು ಮಿಂಚು+ಅಂಚೆ=ಮಿಂಚಂಚೆ ಎಂತಲೂ,
ಇನ್ನು ಕೆಲವರು ಮಿಂಚೋಲೆ ಎಂತಲೂ ಕರೆಯುತ್ತಿದ್ದಾರೆ. ಇವೆಲ್ಲಾ ಈಗ ಹುಟ್ಟಿರುವ
ಶಬ್ಧಗಳು.
ನನಗೆ, 'ಮಿಂಚೋಲೆ' ಅದರ ಧ್ವನಿಯಿಂದ ವಿಹಿತವೆನಿಸುತ್ತದೆ.
ಇನ್ನು ಮೂಲ ಪ್ರಶ್ನೆಗೆ ಬರುತ್ತಾ, ಮೇಲಿನ ಐತಿಹಾಸಿಕ ಹಿನ್ನೆಲೆಯಲ್ಲಿ, ELECTRONICS ಗೆ ಸಮಾನಾಂತರ ಪದವನ್ನು ಯಾರಾದರೂ ರಚಿಸಬಹುದು!
ಶಿವರಾಮ ಕಾರಂತರು ತಮ್ಮ 'ವಿಜ್ಞಾನ ಸಾಧನ' ಪುಸ್ತಕದಲ್ಲಿ ELECTRONICS ಅನ್ನು
'ಇಲೆಕ್ತ್ರಾನಿಕ್ಸ್' ಎಂತಲೇ ಕರೆದರು; ಜೊತೆಗೆ DIODE ಗೆ 'ದ್ವಯಾಂಗ' ಎಂದೂ, TRIODE
ಗೆ 'ತ್ರಯಾಂಗ' ಎಂದೂ, TRANSISTOR ಗೆ ಟ್ರಾನ್ಸಿಸ್ಟರ್ ಎಂದೇ ಕರೆದಿದ್ದಾರೆ.
ನಮ್ಮಲ್ಲಿ ಸಮಾನಾರ್ಥಕ ಪದವಿರದ ಬೇರೆ ಭಾಷೆಯ ಶಬ್ಧಗಳನ್ನು ಮೂಲರೂಪದಲ್ಲಿಯೇ
ಸ್ವೀಕರಿಸುವುದು ಅನುಕೂಲವೂ ಹೌದು, ಸಂಬದ್ಧವೂ ಹೌದು, ವಿಹಿತವೂ ಹೌದು; ತಿಣುಕಿ ತಿಣುಕಿ
ವಿಚಿತ್ರ ದ್ವನಿಯ ಶಬ್ಧಗಳನ್ನು ಸೃಷ್ಠಿಸುವುದಕ್ಕಿಂತ ಪರಿಚಿತವಾಗಿರುವ ಮೂಲ ಶಬ್ಧಗಳೇ
ವಿಹಿತ.