November 14, 2013

ಇಳಿಸಂಜೆ,
ಏರುತಿರುವ ಕಾವು
ಅವಳು ಬದುಕಿದ್ದರೆ ಚೆನ್ನಿತ್ತು;
ಮನಸ್ಸಿಗಿವಳು ಮೈಲಿಗೆ.
ದೇಹ ತೀಡುತಿದೆ
ಮನಸ ಮೂಲೆಗೆ ನೂಕಿ;
ಇವಳ ಸಖ್ಯ ಬಯಸಿದೆ ದೇಹ
ಜಾತಿ ಕಂದಕವ ಮೀರಿ.
ಯಾವ ದುರಾತ್ಮರ ಕಟ್ಟಳೆಯೋ
ಮನುಷ್ಯರ ನಡುವೆ ಕಂದಕ ತೋಡಿ ಹಿಂಡುತಿದೆ;
ದೇಹಕೆ ಬೇಡದ ಜಾತಿ, ಮೈಲಿಗೆ
ಮನಸ ಬಂಧಿಸಿ ಕೂರಿಸಿವೆ.
ಅವಳ ಹಿಂದೆಯೇ ಈ ದಾಹವೂ
ಹೋಗಿದ್ದರೆ ಸರಿಯಿತ್ತು;
ಇಲ್ಲ, ಇವಳೊಂದಿಗಿನ ಸಖ್ಯ ಸರಿಯೆಂದು
ಹೇಳುವವರು ಬೇಕಿತ್ತು.
ಈ ಜಾತಿ, ಈ ಮೈಲಿಗೆಯ ಹುಳವ
ಹುಟ್ಟಿಸಿದವರು ನಿರ್ದೇಹಿಗಳೇ? ಅಥವ
ಮನೋನಿಗ್ರಹಿಗಳೆಂಬ ಅಹಂಕಾರಿಗಳೇ?
ಮನಸ ಹೊತ್ತು ದೇಹ ನಡೆವುದೇ ? ಅಥವ
ಮನಸೇ ದೇಹವ ಹೊತ್ತು ನಡೆವುದೇ ?
---------------------------------------
~ ಎನ್. ಭಾಸ್ಕರ್


The poem captures the tussle between the desirous mind and the conscience, that we face in all facets our lives; and the ways of the mind to seek approval of the forbidden. Dr. S. L. Bhyrappa in his classic novel, Daatu(ದಾಟು) has portrayed this tussle of the mind in the backdrop of conformist society, in a character.
ಇದು ಎಸ್.ಎಲ್. ಭೈರಪ್ಪನವರ ದಾಟು ಕಾದಂಬರಿಯಲ್ಲಿ ಬರುವ ಪಾತ್ರವೊಂದರ ತೊಳಲಾಟದಿಂದ ಪ್ರೇರಿತ ಕವನ.
ಅರಿವಿನ ಇರವ ತಾನರಿಯಲದು ಅರಿದಿಹುದು
ಅರಿವಿನಾ ತೆರನ ಅರಿಯುವಡೆ ತಾ ತನ್ನ
ಅರಿಯದನರಿಯ ಸರ್ವಜ್ಞ

Unless you know yourself, there is no way would you know the ways of Consciousness. Sarvgna.
-------------------------
English
meaning: N Bhaskar
ಸತ್ಯದ
ಮುಖವಾಡ
ಬಿದ್ದರೆ
ಸುಳ್ಳಾದೀತೆ?

ತೊಳೆದ
ಕನ್ನಡಿಯಂತೆ
ತೊಳೆದಷ್ಟೂ
ಹೊಳಪು !

ಪುಟಕ್ಕಿಟ್ಟ
ಹೊನ್ನಿನಂತೆ
ಬೆಂದಷ್ಟೂ
ಹೊಳಪು

ಸೌಂದರ್ಯ
ಅಂತರಂಗದ
ಸೌಂದರ್ಯ
ತೊಯ್ದಷ್ಟೂ ಸ್ನಿಗ್ಧ,

ಸುಂದರ !
---------------
~ ಎನ್. ಭಾಸ್ಕರ್
ಬದುಕ
ಹಾದಿಯೇ ಹಾಗೆ;
ಕ್ಷಣ ಕ್ಷಣವೂ
ಅನುಭವ
ಸಿಹಿಯ ಅಂತರಾಳದ ಕಹಿ
ಕಹಿಯ ತಿರುಳ ಸಿಹಿ
ಕಡೆಗೆ
ಕಹಿಯಲ್ಲದ ಕಹಿ
ಸಿಹಿಯಲ್ಲದ ಸಿಹಿ
ಎಲ್ಲವೂ ಒಂದೇ
ತೆರನಾದ
ಅನುಭಾವ
---------------------
~ ಎನ್. ಭಾಸ್ಕರ್
ಬದುಕ
ಹಾದಿಯೇ ಹಾಗೆ;
ಕ್ಷಣ ಕ್ಷಣವೂ
ಅನುಭವ
ಸಿಹಿಯ ಅಂತರಾಳದ ಕಹಿ
ಕಹಿಯ ತಿರುಳ ಸಿಹಿ
ಕಡೆಗೆ
ಕಹಿಯಲ್ಲದ ಕಹಿ
ಸಿಹಿಯಲ್ಲದ ಸಿಹಿ
ಎಲ್ಲವೂ ಒಂದೇ
ತೆರನಾದ
ಅನುಭಾವ
---------------------
~ ಎನ್. ಭಾಸ್ಕರ್
ನಿನ್ನ ಕಾಣುವ
ನಿನ್ನ ದನಿಯ ಕೇಳುವ
ಹಂಬಲ ನನ್ನಲ್ಲಿ…

ಘ್ರಾಣಿಸಬಲ್ಲೆ
ನೀನೆಲ್ಲಿ ಸುಳಿದರೂ
ನಿನ್ನ ಮೈಯ್ಯ ವಾಸನೆಯ
ನೀ ಬಿಟ್ಟ
ಕೋಣೆಯ ಪ್ರವೇಶದಲ್ಲೇ…

ಕಂಡು ಹಿಡಿಯಬಲ್ಲೆ
ಏಳುವ ನಿನ್ನ
ಹಿಮ್ಮಡಿಗಳ
ಚಲಿಸುವ ನಿನ್ನ ಪಾದಗಳ
ಗಾಳಿಯ ಚಲನೆಯಲ್ಲೇ…

ಅರಿಯಬಲ್ಲೆ
ನಿನ್ನ ಮುತ್ತಿನ ಮತ್ತಲ್ಲೇ
ನಿನ್ನ ತುಟಿಗಳು
ಕೂಡುವ ತೆರೆಯುವ ಪರಿಯ
ನಿನ್ನೊಳಗಿಳಿದು ಮುತ್ತಿಡುವಲ್ಲೇ…

ಕಡೆಗೆ 'ಇನ್ನೂ' ಎಂದು
ನೀ ಪಿಸುಗುಡುವ
ಆ ಆನಂದವ ಕೂಡ…
-------------------------
~ ರೂಮಿ
ಕನ್ನಡಕ್ಕೆ: ~ ಎನ್. ಭಾಸ್ಕರ್

I want to see you.

Know your voice.

Recognize you when you
first come 'round the corner.

Sense your scent when I come
into a room you've just left.

Know the lift of your heel,
the glide of your foot.

Become familiar with the way
you purse your lips
then let them part,
just the slightest bit,
when I lean in to your space
and kiss you.

I want to know the joy
of how you whisper
"more
---------------------------

   ~ Rumi
ನಿನ್ನೊಳು ನಾನು,
ನಾನೇ ನೀನು;
ಅರ್ಥವಾಗುವುದಲ್ಲ ಬಿಡಿ,
ನಿನ್ನ ಮನಸ ಬಿಡುವವರೆಗೆ.
----------------------
~ರೂಮಿ
ಕನ್ನಡಕ್ಕೆ: ~ ಎನ್. ಭಾಸ್ಕರ್


Iam in you and Iam you
No one can understand this
Until he has lost his mind
--------------------------
~Rumi