November 14, 2013

ನಿನ್ನೊಳು ನಾನು,
ನಾನೇ ನೀನು;
ಅರ್ಥವಾಗುವುದಲ್ಲ ಬಿಡಿ,
ನಿನ್ನ ಮನಸ ಬಿಡುವವರೆಗೆ.
----------------------
~ರೂಮಿ
ಕನ್ನಡಕ್ಕೆ: ~ ಎನ್. ಭಾಸ್ಕರ್


Iam in you and Iam you
No one can understand this
Until he has lost his mind
--------------------------
~Rumi
ವಾಸ್ತವ(?)ವೇ ಹೀಗೆ
ಬೆಳಕಿನೊಡಲಿನ ಕತ್ತಲು
ಸತ್ಯದೊಳಗಿನ ಮಿಥ್ಯ
ಮರೀಚಿಕೆಯೊಳಗಿನ ಭರವಸೆ
ನಮ್ಮ ದುಃಖ, ನಮ್ಮ ಸುಖ
ಎಲ್ಲವೂ…
ಕರಗಿ ಒಂದಾಗುವವರೆಗೆ
in to Singular Consciousness.
------------------------------

~ ಎನ್. ಭಾಸ್ಕರ್
ಚಂದ್ರನೋ ನಭದ ಹೆಣ್ಣಂತೆ
ಭುವಿಯೂ ಸಹ
ಸೂರ್ಯನ ಮೋಹ ಇವರಿಬ್ಬರಿಗೂ
ಚಂದ್ರನಿಗೋ ಆವರ್ತಿಸುವ
ಚಕ್ರಗಳು
ಶುಕ್ಲಪಕ್ಷದ ಒಲವು
ಕ್ರಷ್ಣಪಕ್ಷದ ವಿರಹ
ಭುವಿಗೂ
ವಸಂತ, ಹೇಮಂತ, ಗ್ರೀಷ್ಮ, ಶಿಶಿರ
ಋತುಚಕ್ರಗಳು,
ಪ್ರಕೃತಿಯ ಋತುಚಕ್ರಗಳಂತೆ;
ಪುರುಷ ಪ್ರಕೃತಿಯ ಸೆಳೆವಂತೆ,
ಈ ನಭದ ಕನ್ನಿಕೆಯರು
ಸೂರ್ಯನ ಸೆಳೆತದಲ್ಲೇ
ಪರಿಭ್ರಮಿಸುವರು
ಮೋಹದಲ್ಲಿ,
ಪ್ರಕೃತಿ ಪುರುಷನ
ಮೋಹದಲ್ಲಿ ಪರಿಭ್ರಮಿಸುವಂತೆ.
-------------------------
~ ಎನ್. ಭಾಸ್ಕರ್
ಬುದ್ಧ,
ಇದು ಬೆಳಕಲ್ಲ;
ತಿಮಿರವೂ ಅಲ್ಲ;
ಖುಷಿಯ ಗಮ್ಯವೂ ಅಲ್ಲ;
ಅವ ಗಮಿಸಿದ ಹಾದಿಯ ಧೂಳ
ಖುಷಿಯ ತುಣುಕುಗಳೂ ಅಲ್ಲ;
ಅದೂ ಏನೂ ಇರದ
ಬರಿದಾಗಿರುವ
ಎಲ್ಲರೊಳಗೊಂದಾಗಿರುವ
ತಿಳಿಮನ.
----------------------
~ ಎನ್. ಭಾಸ್ಕರ್
ಬುದ್ಧಿ ಮತ್ತು ಮನಸ್ಸುಗಳ
ತಾಕಲಾಟದಲ್ಲಿ
ವೈಯುಕ್ತಿಕವಾಗಿ ಮನಸ್ಸನ್ನು,
ಸಾರ್ವಜನಿಕವಾಗಿ ಬುದ್ಧಿಯನ್ನು
ಹಿಂಬಾಲಿಸುವ
ಇಬ್ಬಂದಿತನವೇ indulgence;
ವ್ಯತಿರಿಕ್ತವೇ ಧ್ಯಾನ;
ಎರಡರಲ್ಲೂ
ಒಂದನ್ನೇ ಕಾಣುವುದು Consciousness.
...and indulgence is Beautiful !

~ಎನ್. ಭಾಸ್ಕರ್
पिबन्ति नद्य: स्वयमेव नाम्भ:
स्वयम् न खादन्ति फलानि वृक्षा:|
नादन्ति सस्यं खलु वारिवाहा :
परोपकाराय सतां विभूतय :||

Rivers do not drink their own water, nor do trees eat their own fruit, nor do rain clouds eat the grains reared by them. The wealth of the noble is used solely for the benefit of others!
ಬುದ್ಧಿಯಿಂದ
ಜೀವನದ ಗಮ್ಯಗಳನ್ನು
ಅರಿಯಬಹುದೇ ವಿನಹಃ
ಅದರಲ್ಲಿ ಪ್ರಯಾಣಿಸಲಾಗದು.
---------------------
~ಎನ್. ಭಾಸ್ಕರ್