October 13, 2012

ನಮಗೆ ಬೇಕಾದ ಇಂಗ್ಲೀಷ್


ಭಾಷೆ ಮತ್ತು ಭಾಷೆಯ ಆಯ್ಕೆ ಸಾರ್ವಜನಿಕವೆನಿಸಿದರೂ, ವ್ಯಕ್ತಿಗತವಾಗಿ ಅದೊಂದು ಖಾಸಗಿ ವಿಷಯ. ಹಾಗೆಂದೇ ನಮ್ಮ ಸಂವಿಧಾನವು ಪ್ರತಿಯೊಬ್ಬರಿಗೂ ತಮ್ಮ ಭಾಷೆಯಲ್ಲಿ ತಮ್ಮನ್ನು ಅಭಿವ್ಯಕ್ತಿಗೊಳಿಸಲು, ವ್ಯವಹರಿಸಲು ಅವಕಾಶವಿತ್ತಿದೆ. ಭಾಷೆಯು ನಿರಂತರವಾಗಿ ಹರಿವ ನದಿ ಇದ್ದಂತೆ; ಕಾಲ ಕ್ರಮೇಣ ಅದರ ಪಾತ್ರ, ಆಳ, ಹರಿವು ಎಲ್ಲವೂ ಬದಲಾಗುತ್ತಾ ಹೋಗುತ್ತದೆ; ನಾವೆಲ್ಲರೂ ನಮ್ಮ ಭಾಷೆಯನ್ನು ಉಳಿಸಿ ಬೆಳೆಸಬೇಕೆಂದು ಹಂಬಲಿಸುತ್ತೇವೆ.

ವಾಸ್ತವವಾಗಿ, ಇಂದು ನಾವು ಆಡುವ ಭಾಷೆ, ನಮ್ಮ ಭಾಷಾ ಪೂರ್ವಿಕರು ತಾವು ಉಳಿಸಿ-ಬೆಳೆಸಬೇಕೆಂದು ಹಂಬಲಿಸಿರಬಹುದಾದ ಅವರ ಭಾಷೆಯೇ ಅಲ್ಲ! ಅದು ಹಳಗನ್ನಡವೋ, ನಡುಗನ್ನಡವೂ ಅಥವ ಇನ್ನೂ ಹಳತಾದ, ಇತಿಹಾಸದ ಹಿಡಿಗೆ ಸಿಕ್ಕಿರದ ಯಾವುದೋ ಪ್ರಾಕಾರವಿದ್ದಿರಬಹುದು. ಹಾಗೆಯೇ, ನಮ್ಮ ಮುಂದಿನ ಪೀಳಿಗೆಯು ಇಂದಿನ ನಮ್ಮ ಭಾಷೆಯ ಪ್ರಾಕಾರವನ್ನೇ ಮಾತನಾಡುತ್ತದೆ ಎಂಬುದಕ್ಕೇ ಯಾವ ಖಾತರಿಯೂ ಇಲ್ಲ!

ಆದುದರಿಂದ ಭಾಷೆಯ, ಸೀಮೆಯ ಗೊಂದಲದಲ್ಲಿ ಸಿಲುಕದೆ ಸಾಮರಸ್ಯ ಮತ್ತು ಸಾರ್ಥಕ ಬದುಕಿಗೆ ಈ ಹೊತ್ತಿನ ಅವಷ್ಯಕತೆಗಳನ್ನು ಗುರುತಿಸಿ ಅನುಸರಿಸುವುದು ಪ್ರಗತಿಪರ ನಿಲುವು. ಈ ಹೊತ್ತಿನ ಅವಷ್ಯಕತೆಯಾದ ಹೊಸಗನ್ನಡ(ಕ್ಷಮಿಸಿ ಹಳಗನ್ನಡವನ್ನು ಕಲಿಸುವುದು ಇಂದಿನ ಅವಷ್ಯಕತೆಯಲ್ಲ) ಮತ್ತು ಭಾರತೀಯ ಇಂಗ್ಲೀಷನ್ನು( ಅಮೇರಿಕನ್ ಇಂಗ್ಲೀಷ್ ಅಲ್ಲ!) ಕಲಿಸುವ, ಕಲಿತುಕೊಳ್ಳುವ ನಿಟ್ಟನಲ್ಲಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗುವುದು ಈ ಕಾಲಘಟ್ಟದ ಅವಷ್ಯಕತೆ. ನಮ್ಮ ಪೀಳಿಗೆಯ ಒಳಿತಿಗಾಗಿ ನಾವೆಲ್ಲರೂ ಈನಿಟ್ಟಿನಲ್ಲಿ ಯೋಚಿಸುವುದು ಒಳ್ಳೆಯದಲ್ಲವೆ?

No comments:

Post a Comment