November 14, 2013

ಇಳಿಸಂಜೆ,
ಏರುತಿರುವ ಕಾವು
ಅವಳು ಬದುಕಿದ್ದರೆ ಚೆನ್ನಿತ್ತು;
ಮನಸ್ಸಿಗಿವಳು ಮೈಲಿಗೆ.
ದೇಹ ತೀಡುತಿದೆ
ಮನಸ ಮೂಲೆಗೆ ನೂಕಿ;
ಇವಳ ಸಖ್ಯ ಬಯಸಿದೆ ದೇಹ
ಜಾತಿ ಕಂದಕವ ಮೀರಿ.
ಯಾವ ದುರಾತ್ಮರ ಕಟ್ಟಳೆಯೋ
ಮನುಷ್ಯರ ನಡುವೆ ಕಂದಕ ತೋಡಿ ಹಿಂಡುತಿದೆ;
ದೇಹಕೆ ಬೇಡದ ಜಾತಿ, ಮೈಲಿಗೆ
ಮನಸ ಬಂಧಿಸಿ ಕೂರಿಸಿವೆ.
ಅವಳ ಹಿಂದೆಯೇ ಈ ದಾಹವೂ
ಹೋಗಿದ್ದರೆ ಸರಿಯಿತ್ತು;
ಇಲ್ಲ, ಇವಳೊಂದಿಗಿನ ಸಖ್ಯ ಸರಿಯೆಂದು
ಹೇಳುವವರು ಬೇಕಿತ್ತು.
ಈ ಜಾತಿ, ಈ ಮೈಲಿಗೆಯ ಹುಳವ
ಹುಟ್ಟಿಸಿದವರು ನಿರ್ದೇಹಿಗಳೇ? ಅಥವ
ಮನೋನಿಗ್ರಹಿಗಳೆಂಬ ಅಹಂಕಾರಿಗಳೇ?
ಮನಸ ಹೊತ್ತು ದೇಹ ನಡೆವುದೇ ? ಅಥವ
ಮನಸೇ ದೇಹವ ಹೊತ್ತು ನಡೆವುದೇ ?
---------------------------------------
~ ಎನ್. ಭಾಸ್ಕರ್


The poem captures the tussle between the desirous mind and the conscience, that we face in all facets our lives; and the ways of the mind to seek approval of the forbidden. Dr. S. L. Bhyrappa in his classic novel, Daatu(ದಾಟು) has portrayed this tussle of the mind in the backdrop of conformist society, in a character.
ಇದು ಎಸ್.ಎಲ್. ಭೈರಪ್ಪನವರ ದಾಟು ಕಾದಂಬರಿಯಲ್ಲಿ ಬರುವ ಪಾತ್ರವೊಂದರ ತೊಳಲಾಟದಿಂದ ಪ್ರೇರಿತ ಕವನ.

No comments:

Post a Comment