November 14, 2013

ನನ್ನಲ್ಲಿ
ಬೆಳಗಲೆಂದು
ನೀ ಕೊಟ್ಟ
ಮಿಂಚು ಹುಳಗಳು
ಕಣ್ಣ ಮುಚ್ಚಿ
ಕುಳಿತಿವೆ
ಹಾರಾಡದೆ
ತನ್ಮಯವಾಗಿ
ಧ್ಯಾನದಲ್ಲಿ
ತಮ್ಮೆಲ್ಲ
ಬೆಳಕಿನ ಗುಚ್ಚದಲ್ಲಿ
ರಮಿಸಲು
ನಿನ್ನಂತೆ
ನೀ ನಿರದ ಹೊತ್ತಿನಲ್ಲಿ.
-------------------------
~ ಎನ್. ಭಾಸ್ಕರ್
ಲೀಲೆ
========
ನೀರ ಹನಿ
ತಾವರೆ
ಎಲೆಯೊಂದಿಗೆ
ಸರಸದಿ
ಮುತ್ತಾಗಿ
ಬೆಳಕ
ಮಧುವ ಹೀರಿ
ಬಣ್ಣಗಳ ಬೀರಿ
ಕುಣಿದು
ಕುಪ್ಪಳಿಸುತ್ತಾ
ನಲಿದು ಬೀಗುತ್ತಿತ್ತು;
ಎಲೆ ಬಾಗಿ
ಗಾಳಿಗೆ
ಅದು
ನೀರಲ್ಲಿ ಕರಗಿ
ಒಂದಾಗುವ
ವರೆಗೆ
-----------------
~ ಎನ್. ಭಾಸ್ಕರ್


The Poem is a summary of a speck of energy assuming life and indulging in the the creation; finding happiness and joy of living; discovering pain and turmoil of survival; and at last, the liberation of getting absorbed in to the vast expance of the Singular Ocean of Consciousness.

Well that's the play of life longing for itself.
ಮೋಹಕ
ಚಂದ್ರನನ್ನೇ
ಮೀರಿಸುವ ನಿನ್ನ ವದನ
ಸುಂದರ ಕಮಲಗಳನ್ನೇ
ಅಣಕಿಸುವ
ನಿನ್ನ ಕಣ್ಣುಗಳು
ಹೊನ್ನಿಗೇ
ಗ್ರಹಣಹಿಡಿಸುವ
ನಿನ್ನ ಮೈಕಾಂತಿ
ದುಂಬಿಗಳನ್ನೇ
ನಾಚಿಸುವ ನಿನ್ನ
ದಟ್ಟ ಮುಂಗುರುಳು
ಕರಿಸಿರಿಯಂಥ
ನಿನ್ನ ಕುಚಗಳು,
ಘನ ಜಘನಗಳು
ಮಧುರವಾದ
ನಿನ್ನ ಕೋಮಲ ಧ್ವನಿ
ಇವೆಲ್ಲವನ್ನೂ
ಅಲಂಕರಿಸಿರುವ
ನಿನ್ನ ಹೇಗೆ
ತುಂಬಿಕೊಳ್ಳುವುದೇ ಸಖೀ.
--------------
~ ಭರ್ತೃಹರಿ
--------------
ಕನ್ನಡಕ್ಕೆ: ~ ಎನ್. ಭಾಸ್ಕರ್

English version of this verse:

verse 90

A face to rival the moon,
Eyes that make mockery of lotuses,
Complexion eclipsing gold's luster,
Thick tresses that shame the black bee,
Breasts like elephant's swelling bosses,
Heavy hips,
A voice enchanting and soft —
The adornment in maidens is natural.

~ Bhartrihari
ಮನಸ್ಸು ಮರ್ಕಟ!
ಅರಿವೇ ಗುರು.
ಮನಸ್ಸು ಮತ್ತು ಅರಿವಿನ
ಹೊಯ್ದಾಟದ ಜೀವನ
ಕೆಲವೊಮ್ಮೆ ಮನಸ್ಸು ಮುಂದು;
ಇನ್ನೊಮ್ಮೆ ತಿಳಿವೇ ಮುಂದು.
ಹೀಗೆ ಹಿಂದು-ಮುಂದಾಗಿ
ಎರಡು ರೇಖೆಗಳಂತೆ
ಸಾಗುವ ನಮ್ಮೊಳ
ಈ ದ್ವಯರು
ದಿಗಂತದಲ್ಲಿ ಒಂದಾಗಿ
ಲೀನವಾಗುವರು.
----------------------------
~ ಎನ್. ಭಾಸ್ಕರ್
ನನ್ನಲ್ಲಿ
ಬೆಳಗಲೆಂದು
ನೀ ಕೊಟ್ಟ
ಮಿಂಚು ಹುಳಗಳು
ಕಣ್ಣ ಮುಚ್ಚಿ
ಕುಳಿತಿವೆ
ಹಾರಾಡದೆ
ತನ್ಮಯವಾಗಿ
ಧ್ಯಾನದಲ್ಲಿ
ತಮ್ಮೆಲ್ಲ
ಬೆಳಕಿನ ಗುಚ್ಚದಲ್ಲಿ
ರಮಿಸಲು
ನಿನ್ನಂತೆ
ನೀ ನಿರದ ಹೊತ್ತಿನಲ್ಲಿ.
-------------------------
~ ಭಾಸ್ಕರ

September 19, 2013

ಸತ್ಯ ಮತ್ತು ಸೌಂದರ್ಯ

ಸತ್ಯವು ಹೇಗೆ ಸಾಪೇಕ್ಷವೋ ಹಾಗೆ ಸೌಂದರ್ಯವೂ ಸಹ. ಅದರಲ್ಲಿ ನಿರಪೇಕ್ಷವಾದ ಯಾವುದೇ ಗುಣಗಳಿರುವುದಿಲ್ಲ. ಸೌಂದರ್ಯವು ಆಯಾ ಕಾಲ, ಆ ಘಟ್ಟದ ಸಾಮೂಹಿಕ ಗ್ರಹಿಕೆ, ತನ್ಮೂಲಕ ಉಂಟಾಗುವ ಪ್ರಜ್ಞೆ, ಅವು ರೂಢಿಸಿಕೊಳ್ಳುವ ಮೌಲ್ಯಗಳನ್ನು ಅವಲಂಬಿಸಿರುತ್ತದೆ. ಹೀಗೆ ಸಾಗುವ ಸೌಂದರ್ಯ ಲಹರಿ, ತತ್-ಕಾಲಿಕವಾಗಿದ್ದು ಚಲನಶೀಲ ಗುಣವನ್ನು ಹೊಂದಿರುತ್ತದೆ; ಹಾಗಾಗಿ, ಯಾವುದು ಚಲನಶೀಲವೋ ಅದು ನಿರಂತರವಾಗಿರಲು ಸಾಧ್ಯವಿಲ್ಲ. 

 ಒಟ್ಟಾರೆ, ವಸ್ತು ಪ್ರಪಂಚದಲ್ಲಿ ಸೌಂದರ್ಯವೆನ್ನುವುದು ಮಿಥ್ಯ. ಆದರೆ, ನಾವು ಅಂತರ್ಮುಖಿಯಾಗಿ ಅಂತರಂಗವನ್ನು ಹೊಕ್ಕು ಮಥಿಸಿದರೆ ನೈಜ ಸೌಂದರ್ಯದ ದರ್ಶನವಾಗುತ್ತದೆ. 

ಹೀಗಾಗಿ, ನಮ್ಮ ಸದ್ಗುಣಗಳೇ ನಮ್ಮ ನೈಜ ಸೌಂದರ್ಯ.

September 10, 2013

'ಪದಾರ್ಥ ಚಿಂತಾಮಣಿ' ಯಲ್ಲಿ 
 https://www.facebook.com/groups/342520122466608/

ಹೀಗೊಂದು ಪ್ರಶ್ನೆ:
ಇಂಗ್ಲೀಷ್ ನ ELECTRONICS ಗೆ ಕನ್ನಡದ ಸಮಾನಾರ್ಥಕ ಪದ ಯಾವುದು?

ಇಂಗ್ಲೀಷ್ ನ ELECTRONICS ಪದವೇ ಈಗ ಒಂದು (misnomer ) ವಿಹಿತಾರ್ಥವಿರದ ಶಬ್ಧವಾಗಿದೆ;

ಇದರ ಹುಟ್ಟಿಗೆ ಕಾರಣವೂ ಇದೆ. Vacuum Tubes/electronic Valves ಗಳ ಕಾಲದಲ್ಲಿ ಹುಟ್ಟಿದ ಪದವಿದು. ಅಲ್ಲಿ electron ಗಳ ಹರಿವು ಇರುತ್ತಿತ್ತು; ಹಾಗಾಗಿ ಈ Vacuum Tubes/electronic Valves ಗಳನ್ನು ಒಳಗೊಂಡ ಎಲ್ಲ ಉಪಕರಣಗಳಿಗೆ electronic devices ಎಂದೂ, ಅದರ ಶಾಸ್ತ್ರೋಕ್ತ ಅಧ್ಯಯನಕ್ಕೆ Electronics ಎಂದು ಕರೆಯಲಾರಂಭಿಸಿದರು; ಹೀಗೆ 'ELECTRONICS' ಪದ ಹುಟ್ಟಿತು.

ನಂತರದ ದಿನಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿ ಗೊಂಡು Semi Conductor diode ಗಳು Transistor ಗಳು ಈ Vacuum Tubes/electronic Valves ಗಳನ್ನು ಹಿಂದಿಕ್ಕಿದವು. ಈ Semi conductor ಗಳಲ್ಲಿ electrons ಮತ್ತ holes ಗಳೆಂಬ ಪರಸ್ಪರ ವಿರುದ್ಧ ವಿದ್ಯದಂಶಳಿರುವ ಕಣಗಳಿಂದ (for now let us not get in to the details of holes; they are not particles, but have qualities of particles) ಎಲ್ಲ ಕಾರ್ಯ ನಡೆಯುತ್ತದೆ. ಆದರೆ, ಈ electronics ಪದ ಚಾಲ್ತಿಯಲ್ಲಿದ್ದುದರಿಂದ ಹಾಗೇ ಕರೆಯುವ ರೂಢಿಯಾಯ್ತು.

Computer ಸಹ ಈ Semiconductor ಗಳಿಂದಲೇ ತಯಾರಾಗಿರುವುದರಿಂದ ಅದರ ಮೂಲಕ ರವಾನೆಯಾಗುವ Mail ಅನ್ನು Electronic Mail ಅಂತಲೂ ಸಂಕ್ಷಿಪ್ತವಾಗಿ E-Mail ಅಂತಲೂ ರೂಢಿಯಲ್ಲಿ ಬೆಳೆದು ಬಂತು.

ಈಗ ನಾವು ಇದನ್ನು ಕನ್ನಡಕ್ಕೆ ತರುವಾಗ ಹಲವರು ವಿಧ-ವಿಧವಾಗಿ ಪದ ಹುಟ್ಟು ಹಾಕಿದ್ದಾರೆ. ಮಿಂಚಿನ ವೇಗದಲ್ಲಿ ತಲುಪುವ ಅಂಚೆ ಎಂದು ಮಿಂಚು+ಅಂಚೆ=ಮಿಂಚಂಚೆ ಎಂತಲೂ, ಇನ್ನು ಕೆಲವರು ಮಿಂಚೋಲೆ ಎಂತಲೂ ಕರೆಯುತ್ತಿದ್ದಾರೆ. ಇವೆಲ್ಲಾ ಈಗ ಹುಟ್ಟಿರುವ ಶಬ್ಧಗಳು.

ನನಗೆ, 'ಮಿಂಚೋಲೆ' ಅದರ ಧ್ವನಿಯಿಂದ ವಿಹಿತವೆನಿಸುತ್ತದೆ.

ಇನ್ನು ಮೂಲ ಪ್ರಶ್ನೆಗೆ ಬರುತ್ತಾ, ಮೇಲಿನ ಐತಿಹಾಸಿಕ ಹಿನ್ನೆಲೆಯಲ್ಲಿ, ELECTRONICS ಗೆ ಸಮಾನಾಂತರ ಪದವನ್ನು ಯಾರಾದರೂ ರಚಿಸಬಹುದು!

ಶಿವರಾಮ ಕಾರಂತರು ತಮ್ಮ 'ವಿಜ್ಞಾನ ಸಾಧನ' ಪುಸ್ತಕದಲ್ಲಿ ELECTRONICS ಅನ್ನು 'ಇಲೆಕ್ತ್ರಾನಿಕ್ಸ್' ಎಂತಲೇ ಕರೆದರು; ಜೊತೆಗೆ DIODE ಗೆ 'ದ್ವಯಾಂಗ' ಎಂದೂ, TRIODE ಗೆ 'ತ್ರಯಾಂಗ' ಎಂದೂ, TRANSISTOR ಗೆ ಟ್ರಾನ್ಸಿಸ್ಟರ್ ಎಂದೇ ಕರೆದಿದ್ದಾರೆ.

ನಮ್ಮಲ್ಲಿ ಸಮಾನಾರ್ಥಕ ಪದವಿರದ ಬೇರೆ ಭಾಷೆಯ ಶಬ್ಧಗಳನ್ನು ಮೂಲರೂಪದಲ್ಲಿಯೇ ಸ್ವೀಕರಿಸುವುದು ಅನುಕೂಲವೂ ಹೌದು, ಸಂಬದ್ಧವೂ ಹೌದು, ವಿಹಿತವೂ ಹೌದು; ತಿಣುಕಿ ತಿಣುಕಿ ವಿಚಿತ್ರ ದ್ವನಿಯ ಶಬ್ಧಗಳನ್ನು ಸೃಷ್ಠಿಸುವುದಕ್ಕಿಂತ ಪರಿಚಿತವಾಗಿರುವ ಮೂಲ ಶಬ್ಧಗಳೇ ವಿಹಿತ.

COFFEE ಗೆ ಕನ್ನಡಪದ ಸೃಷ್ಠಿಸುವುದಾದರೆ ಹೇಗೆ ಯೋಚಿಸಿ!

ಇನ್ನು ಆಯ್ಕೆ ನಿಮ್ಮದು!